top of page

ಕಾವೇರಿ ಜೀವನದಿ, ಕರ್ನಾಟಕದ ಜೀವನಾಡಿ..


ಕಾವೇರಿ ಜೀವನದಿ, ಕರ್ನಾಟಕದ ಜೀವನಾಡಿ.. ಹೌದು ನಿಜ… ಆದರೇ ಎರಡು ರಾಜ್ಯಗಳ ನಡುವೆ ನಡೆಯುತ್ತಿರುವ ಹೋರಾಟ, ಗುದ್ದಾಟದಲ್ಲಿ ಜನರ ಜೀವಗಳೇ ಆ ನದಿಯಲ್ಲಿ ತೇಲಿ ಹೋಗುತ್ತಿವೆ…

ಸ್ನೇಹಿತರೇ, ನಿಮೆಲ್ಲರ ಹೋರಾಟಕ್ಕೆ ಮತ್ತು ಅಭಿಪ್ರಾಯಕ್ಕೆ ಖಂಡಿತವಾಗಿಯೂನಮ್ಮ ಸಹಕಾರ ಹಾಗೂ ಬೆಂಬಲವಿದೆ. ಆದರೆ ಸಮಸ್ಯೆಯೇನೆಂದರೇ, ಒಬ್ಬ ಜನ ಸಾಮಾನ್ಯನಿಗೆ ಇರುವ ಕಾಳಜಿ, ದುಗುಡ, ಆಕ್ರೋಶ, ನೋವು, ನಮ್ಮ ರಾಜಕೀಯ ಪ್ರತಿನಿದಿಗಳಿಗೆ ಇಲ್ಲದೇ ಹೋಯಿತಲ್ಲಾ ಎಂದಷ್ಟೇ..

ನನಗೆ ಅರ್ಥವಾಗದೇ ಇರುವ ವಿಷಯವೇನೆಂದರೇ..ಕಾವೇರಿ ನೀರಿನ ವಿಷಯ ನಮ್ಮೆಲ್ಲರಿಗೂ ತಿಳಿದಿರುವಂತೆ ಸುಮಾರು ೩ ದಶಕಗಳಿಂದ ನಡೆಯುತ್ತಲೇ ಇದೆ. ನನ್ನ ಆಲೋಚನೆಗೆ ಎಟುಕದ ಅಥವಾ ಪ್ರಶ್ನೆಯಾಗಿಯೇ ಉಳಿದಿರುವ ಕೆಲವು ಸಂಗತಿಗಳೆಂದರೆ…

  1. ಕಾವೇರಿ ನೀರನ್ನು ಕರ್ನಾಟಕದಿಂದ ತಮಿಳುನಾಡಿಗೆ ಬಿಡಬೇಕೆಂದು ನ್ಯಾಯಾಲಯದ ತೀರ್ಪೆಂದು ಹೇಳುವುದಾದರೆ ಯಾವ ಅಂಕಿ ಅಂಶ ಆದರದ ಮೇಲೆ ಈ ತೀರ್ಪು ಬದ್ಧವಾಗಿದೆ ?

  2. ಈ ವಾಸ್ತವಾಂಶಗಳನ್ನು ನಮ್ಮ ಮತ್ತು ನೆರೆ ರಾಜ್ಯದ ಕಾನೂನು ಪ್ರತಿನಿಧಿಗಳು ಸುಪ್ರೀಂ ನ್ಯಾಯಾಲಯದಲ್ಲಿ ಯಾವ ರೀತಿ ಮಂಡಿಸಿದ್ದಾರೆಂದು ನಮಗೆ ತಿಳಿದಿಲ್ಲ.. ಅಥವಾ ನಿಜವಾದ ಪರಿಸ್ಥಿತಿಯನ್ನು ನ್ಯಾಯಾಲಯದ ಮುಂದೆ ಇಟ್ಟಮೇಲೆಯೂ ಕರ್ನಾಟಕದಿಂದ ಕಾವೇರಿನೀರನ್ನು ತಮಿಳುನಾಡಿಗೆ ಬಿಡಬೇಕೆಂದು ತೀರ್ಪುಕೊಟ್ಟಿದಾರೆಯೇ ನ್ಯಾಯಾದೀಶರು ? ದೇವರೇ ಬಲ್ಲ..

  3. ಪ್ರತೀ ಬಾರಿ ಕಾವೇರಿ ನೀರಿನವಿಷಯವನ್ನು ತಮಿಳುನಾಡಿನ ಮುಖ್ಯಮಂತ್ರಿಗಳು ಕೈಗೆತ್ತಿ ಕೊಂಡಾಗ..ಜಯ ಅವರದೇ.. ಇದರ ಹಿಂದೆ ಏನಿದೆ..ಈ ವಿಷಯವಾಗಿ ನೆರೆರಾಜ್ಯದವರೊಂದಿಗೆ ಕಾನೂನು ರೀತ್ಯಾ ಹೊರಡುವುದಕ್ಕೆ ಎಲ್ಲಿದೆ ಕೊರತೆ..ಕುಡಿಯುವುದಕ್ಕೂ ನಮಗೆ ನೀರಿಲ್ಲವೆಂದಮೇಲೂ, ನ್ಯಾಯಾಲಯದ ಆದೇಶಬಂದ ಕೂಡಲೇ ನೀರನ್ನು ಹೇಗೆ ಬಿಟ್ವಿ..ಈಗ ನಮ್ಮ್ ಜನರಿಗೆ ಕುಡಿಯುವುದಕ್ಕೆ ಏನಿದೆ ಪರ್ಯಾಯ ವ್ಯವಸ್ತೆ..??

  4. ತಮಿಳುನಾಡು ಸುಪ್ರೀಂ ನ್ಯಾಯಾಲಯಕ್ಕೆ ಕೊಟ್ಟಿರುವ ಅಂಕಿಅಂಶಗಳು ಸುಳ್ಳಾ ಅಥವಾ ನಮ್ಮ ಪರ ವಕೀಲರು ಸಲ್ಲಿಸಿರುವ ಸತ್ಯಾಸತ್ಯತೆಗಳು ಸುಳ್ಳಾ..

  5. ಕಾನೂನಿನ ಚೌಕಟ್ಟಿನಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲೇಬೇಕೆಂದು ತೀರ್ಪೇ ಇದ್ದರೆ, ಅವರು ಪ್ರತಿ ಬಾರಿ ನೀರು ಬಿಡಿಎಂದು ನಮ್ಮನ್ನು ಕೇಳುವುದ್ಯಾಕೆ.. ನಾವು ಬಿಡುವುದಿಲ್ಲ ವೆನ್ನುವುದ್ಯಾಕೆ..ಬಿಡುವುದಿಲ್ಲ ವೆನ್ನುವುದೇ ನಮ್ಮ ವಾದವಾಗಿದ್ದು ಹಾಗೂ ಪರಿಸ್ತಿತಿಯು ಅದಕ್ಕೆ ಎಡೆ ಮಾಡಿಕೊಡದೆ ಇದ್ದ ಸಂದರ್ಭದಲ್ಲೂ ನೀರನ್ನು ತಮಿಳುನಾಡಿಗೆ ಬಿಡಲೇ ಬೇಕಾದ ಒತ್ತಡವಿದೆ ಎಂದರೆ ಇದಕ್ಕೆ ಏನು ಕಾರಣ, ಯಾರು ಕಾರಣ.. ? ಎಲ್ಲರಿಗೂ ತಿಳಿದಿರುವಂತೆ ಡ್ಯಾಮ್ ತುಂಬಿ ಓವರ್‌ಫ್ಲೋ ಆದರೆ, ಮೇಲೆ ಹರಿಯುವ ನೀರನ್ನು ಯಾರು ತಡೆಯುವುದಿಲ್ಲ..ಅದು ನೆರೆ ರಾಜ್ಯಕ್ಕೆ ಹೋಗಿಯೇ ತೀರುವುದು..

  6. ನೆರೆ ರಾಜ್ಯದಿಂದ ಕಾವೇರಿನೀರಿಗಾಗಿ ಬೇಡಿಕೆ ಇಡುತ್ತಿರುವವರು ರಾಜಕೀಯದವರೇ..ಅವ್ರು ಈ ಬೇಡಿಕೆಯನ್ನು ಮುಂದಿಟ್ಟಾಗ ಅವರ ರಾಜಕೀಯದ ಸಾಧಕ ಬಾಧಕಗಳನ್ನು ಯೋಚಿಸಿರುವುದಿಲ್ಲವೇ.. ಯಾವುದೇ ರಾಜ್ಯದ ಮುಖ್ಯಮಂತ್ರಿ ಆದರೂ ಎಲ್ಲರಿಗೂ ಒಂದೇ ರೀತಿಯ ಅಧಿಕಾರ, ಸ್ತಾನ, ಮಾನ, ಗೌರವಗಳು ಇರುತ್ತವೆ.. ನಮ್ಮ ಮುಖ್ಯಮಂತ್ರಿಗಳಿಗೆ ತಮ್ಮ ಅಧಿಕಾರವನ್ನು ಉಪಯೋಗಿಸಿಕೊಂಡು ರಾಜ್ಯದ ಜನತೆಗೆ ನ್ಯಾಯ ಒದಗಿಸಿ ಕೊಡುವುದಕ್ಕಿಂತಲೂ ಬೇರೆ ಏನು  ಘನ ಕಾರ್ಯವಿದೆಯೋ ಆ ಭಗವಂತನೇ ಬಲ್ಲ..ಅವರಿಗೆ ಪ್ರತಿ ಬಾರಿಯೂ ತಲೆಬಗ್ಗಿಸಿ ಕೊಂಡು ಆದೇಶವನ್ನು ಪಾಲಿಸುವುದೆಂದರೆ ಅವರಿಗೆ ಒಂದು ರೀತಿ  ಅಭ್ಯಾಸವಾಗಿಬಿಟ್ಟಿದೆ..

  7. ಅಥವಾ ಈ ರೀತಿ ಸುಮ್ಮನಿರುವುದಕ್ಕೆ ಎಷ್ಟು ತಗೊಂಡಿದ್ದಾರೋ ಏನೋ ಯಾರಿಗ್ ಗೊತ್ತು…ಎನ್ಬೇಕಾದ್ರು ನಡಿಬೌಹ್ಡು.. ರಾಜಕೀಯದಲ್ಲಿ..

  8. ಈ ವಿಷ್ಯವಾಗಿ ನಮ್ಮ ಇಡೀ ರಾಜ್ಯದಲ್ಲಿ ದನಿಎತ್ತಿ ಹೋರಾಡುವ ಒಬ್ಬ ರಾಜಕೀಯ ಗಂಡಸು ನಮ್ಮಲ್ಲಿಲ್ಲವೇ ? ಅಥವಾ ಗಂಡಸರು ಇದ್ದರೂ ಈ ವಿಷಯವನ್ನು ಕೈಗೆತ್ತಿ ಕೊಂಡು ನ್ಯಾಯಾಲಯದ ತೀರ್ಪನ್ನು ಪ್ರಶ್ನೆಮಾಡುವ, ಮತ್ತು ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡುವ ಗಂಡಸ್ತನ ಯಾರಿಗೂ ಇಲ್ಲವೇ.. ಅಥವಾ ಯಾರಿಗೂ ಬೇಕಿಲ್ಲವೇ..

  9. ತಮಿಳುನಾಡಿನಲ್ಲಿ ಅವರಿಗೆ ಸಾಕಾಗುವಷ್ಟೂ ನೀರಿದ್ದರೂ ನಮ್ಮ ರಾಜ್ಯದಿಂದ ಕಾವೇರಿ ನೀರನ್ನು ಕಸಿದುಕೊಳ್ಳುವಲ್ಲಿ ಪ್ರತೀ ಬಾರಿಯೂ ಯಶಸ್ಸು ಅವರದೇ.. ಸುವರ್ಣ ನ್ಯೂಸ್ನ್ ಕವರ್ ಸ್ಟೋರೀ ನಲ್ಲಿ ಕೆಲವೊಂದು ವಿಷಯಗಳನ್ನು ನೆನ್ನೆ ಟಿವಿಯಲ್ಲಿ ನೋಡಿದೆ, ಅದು ನಿಜವೇ ಆದರೇ, ನಮ್ಮ ರಾಜ್ಯದ ನಾಯಕರು ಯಾಕೆ ಹಿಂಜರಿಯುತ್ತಿದ್ದಾರೆ..

ನೆನ್ನೆ ಇಡೀ ರಾಜ್ಯದಲ್ಲಿ ನಡೆದ ಮುಷ್ಕರ, ಪ್ರತಿಭಟನೆಗೆ ನಮಗೆ ನಿಜವಾಗಲೂ ನ್ಯಾಯ ಸಿಗ್ಗುತ್ತೆ ಎಂದು ನಿಮಗೆ ನಂಬಿಕೆ ಇದೆಯೇ ಅಥವಾ ಕೇವಲ ಮತ್ತೊಂದು ದಿನ ರಜೆ ಸಿಕ್ಕಿತ್ತೆಂದು ಅಷ್ಟರಲ್ಲಿಯೇ ಸಮಾಧಾನ ಮಾಡಿಕೊಳ್ಳಬೇಕೆ ??

ಕೊನೆಗೆ ನನಗನಿಸ್ಸಿದ್ದು ಇಷ್ಟೇ.. ಇದರಲ್ಲಿ ಏನೋ ಒಳ ಕುತಂತ್ರ, ಲಾಬೀ ನಡೆಯುತ್ತಿದೆ ಅಷ್ಟೇ.. ಮತ್ತಿನ್ನೇನೂ ಇಲ್ಲ.. ಕರ್ನಾಟಕದ ಕಾವೇರಿ ನೀರನ್ನು ಮಾರಾಟಕ್ಕಿಟ್ಟಿದ್ದಾರೆ ಅಷ್ಟೇ.. ರಾಜ್ಯದ ಜನರಿಗೆ ಕಣ್ಣೊರೆಸುವ ಮಾತುಗಳನ್ನಾಡುತ್ತಾ ಮೋಸ ಮಾಡುತ್ತಿದ್ದಾರಷ್ಟೇ..

ಈ ವಿಷಯವಾಗಿ ನಾವು ನಮ್ಮ ಪರಿಮಿತಿಯಲ್ಲಿ ಏನು ಮಾಡುವುದಕ್ಕೆ ಸಾಧ್ಯವೋ ಅದೆಲ್ಲವನ್ನೂ ಮಾಡುವುದಕ್ಕೆ ಸಿದ್ಧ.. ಆದರೆ ಮಾತನಾಡಬೇಕಾದವರು, ಹೋರಾಡಬೇಕಾದವರು.. ಸುಮ್ಮನೆ ತೆಪ್ಪಗೆ ಕೈಕಟ್ಟಿಕೊಂಡು ಕುಳಿತಿದ್ದಾರೆ ಎನ್ನುವುದೇ ಬೇಸರದ ಸಂಗತಿ.. ಇನ್ನೂ ಕೆಲ ಬೇಜವಾಬ್ಧಾರಿ ಪ್ರತಿನಿಧಿಗಳು ನಮಗೂ ಇದಕ್ಕೂ ಯಾವುದೇ ಸಂಭಂದವೇ ಇಲ್ಲವೆನ್ನುವ ರೀತಿಯಲ್ಲಿ ಆರಾಮವಾಗಿ ಬೇರೆಯೇ ಲೋಕದಲ್ಲಿದ್ದಾರೆ, ಇನ್ನು ಕೆಲವರಂತೂ ಆನ್‌ಲೈನ್ನಲ್ಲಿ ತಮ್ಮ ದುರಹಂಕಾರ, ಉದ್ಧಟತನವನ್ನು ತೋರಿಸುತ್ತಿದ್ದಾರೆ..ಇವರೆಲ್ಲರಿಗೂ ಕಾಲವೇ ಉತ್ತರಿಸಬೇಕು.. ಜೊತೆ ಜೊತೆಯಲ್ಲಿ ನಾವು ಕೂಡ ಸಮಯ ನೋಡಿ ಬುದ್ಧಿಕಲಿಸಬೇಕಾಗುತ್ತದೆ..

ಇದರ ಬಗ್ಗೆ ಎಷ್ಟೇ ಮಾತನಾಡಿದರೂ, ಎಷ್ಟು ಬರೆದರೂ ಅಷ್ಟೇ.. ಎಲ್ಲಿಯವರೆಗೆ ಇಂತಹ ನಿಷ್ಪ್ರಯೋಜಕ ಸ್ವಾರ್ಥ ರಾಜಕಾರಣಿಗಳು ಇರುತ್ತಾರೋ ಅಲ್ಲಿಯವರೆಗೆ ನಮಗೆ ನ್ಯಾಯಸಿಗುತ್ತೆಂದಾಗಲಿ ಅಥವಾ ಯಾವುದೇ ರೀತಿಯ ಪ್ರಯೋಜನ ವಾಗುತ್ತೆಂದು ನನಗನಿಸ್ಸುತ್ತಿಲ್ಲ..

ಆದರೇ ನಮ್ಮ ಅಂತರಾಳದ ಬೆಂಕಿ, ಕಿಚ್ಚು.. ಆರುತ್ತಿಲ್ಲ.. ಏನುಮಾಡಬಹುದು ನೀವೇ ಹೇಳಿ..

ಇಂತಿ, ರಾಘವೇಂದ್ರ ಪ್ರಸಾದ್ ಕನ್ನಡಾಭಿಮಾನಿ ಬೆಂಗಳೂರು.

Recent Posts

See All
Deep Lessons from the Idols..

We see in all the Hindu temples, many images and idols around the premises which is a great work of art, architecture, history and...

 
 
 
Be a Good Listener

You may seem to be one unless you introspect and understand the real meaning of what is actual ‘Listening’. You may have done many things...

 
 
 

Comments


bottom of page