top of page

ವೈಜ್ಞಾನಿಕ ಆವಿಷ್ಕಾರಗಳು ಇಂದಿನ ಮಾನವ ಕುಲಕ್ಕೆ ವರವೋ? ಶಾಪವೋ? "ಜೀವನವೇ ವಿಜ್ಞಾನ"

Writer's picture: Raghavendra PrasadRaghavendra Prasad

ಅನಾದಿಕಾಲದಿಂದಲೂ ಮನುಷ್ಯನು ವಿಕಾಸ ಹೊಂದುತ್ತ ಬಂದಿದ್ದಾನೆ. ಅವನು ತಾನು ಏನಾದರೂ ಆಗಬೇಕು, ಸಾಧಿಸಬೇಕು, ತನ್ನ ಯಶಸ್ಸಿನ ದಾರಿಯನ್ನು ತೋರಿಸಬೇಕು ಎಂದು ಬಯಸುತ್ತಾನೆ. ಮಾನವ ಜೀವನವನ್ನು ನಿಯಂತ್ರಿಸುವ ತಂತ್ರವೊಂದಿದೆ. ಯಾವುದಾದರೂ ಕೆಲಸವನ್ನು ಪೂರೈಸಲು ಒಂದು ಸಶಕ್ತವಾದ ತಂತ್ರ ವಿಧಾನವು ಅವಶ್ಯಕ.


ವೈಜ್ಞಾನಿಕವಾಗಿ ವಿಶ್ಲೇಷಿಸುವುದಾದರೇ ಅದರಲ್ಲಿ ನಾಲ್ಕು ಮೂಲ ತತ್ವಗಳು ಅಡಗಿದೆ. ಅವುಗಳೆಂದರೆ ;

೧.ಶರೀರ, ೨. ಶ್ವಾಸ, ೩. ವಾಣಿ , ೪. ಉಸಿರು.


ಮಾನವವಿಕಾಸದಲ್ಲಿ ಇವು ಸಾಧಕಗಳಾದರು ಆಗಬಹುದು, ಬಾಧಕಗಳಾದರು ಆಗಬಹುದು.

ಸೃಷ್ಟಿ (CREATION) ಮಾನವನ ಬುದ್ಧಿ ಶಕ್ತಿಗೂ ಊಹೆಗೂ ನಿಲುಕದಷ್ಟು ಉದ್ದ ಅಗಲ ಆಕಾರಗಳನ್ನುಳ್ಳ ವಿಶ್ವವನ್ನು ಆರ್ಯರು ಬ್ರಹ್ಮಾಂಡ ವೆಂದು ಕರೆಯುವ ವಾಡಿಕೆ ಇದೆ. ಇದರ ಉತ್ಪತ್ತಿ ಯನ್ನು ಕುರಿತು ಬೇರೆ ಬೇರೆ ಮತೀಯರು ಒಂದೊಂದು ವಿಧವಾಗಿ ವರ್ಣಿಸಿದ್ದರೂ, ಒಟ್ಟಿನಲ್ಲಿ ಅದು ಮಹತ್ತರವಾದ ದೈವ ಸೃಷ್ಟಿಯೆಂದೂ ಮನುಷ್ಯ ಮಾತ್ರದವರು ಅದರ ಪರಿಮಿತಿಯನ್ನು ನಿರ್ಧಿಷ್ಟವಾಗಿ ಹೇಳುವುದು ಅಸಾಧ್ಯವೆಂದೂ ಎಲ್ಲರೂ ಒಪ್ಪುವರು. ಹೀಗೆಂದ ಮಾತ್ರಕ್ಕೆ ಅದರ ಪರಿಶೋದನೆಯನ್ನು ಅವರಲ್ಲಿ ಯಾರೂ ಕೈ ಬಿಟ್ಟಿರುವುದಿಲ್ಲ.


ವಿಚಾರಶೀಲರೂಮೇಧಾವಿಗಳೂ ಆದ ವಿಜ್ಞಾನಿಗಳು ತದೇಕ ಧ್ಯಾನದಿಂದ ಪರಿಶೀಲಿಸಿ, ತಮಗೆ ನಿಶ್ಚಯವಾಗಿ ತೋರಿದ ಅಂಶಗಳನ್ನು ನಿರ್ಭಯವಾಗಿ ಪ್ರಕಟಿಸುತ್ತಾ ಬಂದಿದ್ದಾರೆ. ವಿಜ್ಞಾನ ಯುಗವಾದ ಈ ಕಾಲದಲ್ಲಿ ಈ ಕೆಲಸವು ತುಂಬಾ ಶ್ರದ್ಧೆಯಿಂದಲೂ, ಪೈಪೋಟಿಯಿಂದಲೂ ನಡೆಯುತ್ತಿರುವುದು, ಹಿಂದೂ ಆರ್ಯರು ಶತಮಾನಗಳ ಹಿಂದೆಯೇ ಈ ಭಾಗದಲ್ಲಿ ಬಹು ಮಟ್ಟಿಗೆ ಮುಂದುವರಿದು, ಆಧುನಿಕ ಯಂತ್ರೋಪಕರಣಗಳ ಸಹಾಯವಿಲ್ಲದಿದ್ದರೂ, ಗಹನವಾದ ವಿಚಾರ ಪರಿಶೀಲನೆಯಿಂದ ತಾವು ದೃಢೀಕರಿಸಿದ ವಿಷಯಗಳನ್ನು "ಜ್ಯೋತಿಷ್ಯಶಾಸ್ತ್ರ" ರೂಪದಲ್ಲಿ ಬರೆದಿತ್ತು ಲೋಕೋಪಕಾರ ಮಾಡಿರುವರು.


ವಿಜ್ಞಾನದ ತಳಹದಿಯನ್ನು ಉತ್ಪ್ರೇಕ್ಷೆಯಿಲ್ಲದೆ ಮಹತ್ತರವಾಗಿ ಬಿಂಬಿಸುತ್ತಿರುವ ಸೌರವ್ಯೂಹ, ಚಂದ್ರಮಂಡಲ, ಗ್ರಹಗಳು, ಧೂಮಕೇತುಗಳು, ನಕ್ಷತ್ರಗಳು, ಭೂಗೋಳ, ಕಾಲ ಮತ್ತು ಶಾಖ, ಭೂಕಂಪ, ಅಗ್ನಿ ಪರ್ವತ, ಮಣ್ಣಿನ ಉತ್ಪತ್ತಿ, ವಾತಾವರಣ, ಮೋಡಗಳು, ಮಳೆ, ಮಂಜಿನ ಗೆಡ್ಡೆ, ಹಿಮ ನದಿಗಳು, ಅಣುಶಕ್ತಿ, ವಿಶ್ವಯಾನ ಇನ್ನೂ ಹತ್ತು ಹಲವಾರು ಸಂಗತಿಗಳು ವಿಗ್ನವವನ್ನೇ ಅವಲಂಬಿಸಿರುವಂಥಹವು.

ಇವುಗಳೆಲ್ಲವೂ ನಮಗೆ ಶಾಪವೇ? ನೀವೇ ಆಲೋಚಿಸಿ ವಿಚಾರಮಾಡಿ.


ಉದಾ: ಜೀವನ ವಿಜ್ಞಾನದಲ್ಲಿ ಯೋಗ, ಕರ್ಮಶಾಸ್ತ್ರ, ಧರ್ಮಶಾಸ್ತ್ರಗಳ ಬೋಧನೆಯು ಸೇರಿಕೊಂಡಿದೆ. ಇಂದಿನ ಶಿಕ್ಷಣದಲ್ಲಿ ಶರೀರ ಸಂರಚನಾ ವಿಜ್ಞಾನ, ಶರೀರ ಕ್ರಿಯಾ ವಿಜ್ಞಾನ, ಮನೋ ವಿಜ್ಞಾನಗಳು ಬಹಳ ಮುಖ್ಯವಾದುವು. ಈ ವಿಷಯಗಳು ಸೇರಿದಾಗ ಸಂಪೂರ್ಣ ಸಮನ್ವಿತ ಜೀವನ ಮೂಡಿಬರುತ್ತದೆ.


ವಿದ್ಯಾರ್ಥಿಗಳ ಕೈಯಲ್ಲಿ ಗಿಣಿಪಾಠ ಮಾಡಿಸುವುದು ನಮ್ಮ ಉದ್ದೇಶವಲ್ಲ. ನಾವು ಅವರಲ್ಲಿ ಏಕಾಗ್ರತೆ, ಇಚ್ಛಾಶಕ್ತಿ ಮತ್ತು ಸಂಕಲ್ಪ ಶಕ್ತಿಗಳನ್ನು ಬೆಳೆಸಬಯಸುತ್ತೇವೆ. ಇದಕ್ಕಾಗಿ ಹೆಚ್ಚಿನ ಕ್ರಮ ಮತ್ತು ಶ್ರಮ ವಹಿಸುವುದು ಅಗತ್ಯ. ಇಂದು ವಿದ್ಯಾರ್ಥಿಗಳಲ್ಲಿ ಪರಿವರ್ತನೆಯನ್ನುಂಟು ಮಾಡುವುದೇ ಸಮಸ್ಯೆಯಾಗಿದೆ. ಉಪದೇಶದಿಂದ ಯಾವಬದಲಾವಣೆಯೂ ಸಾಧ್ಯವಿಲ್ಲ. ಏಕೆಂದರೆ ಅದು ಅವಲಂಬಿಸಿರುವುದು ಜೀವನ ವಿಜ್ಞಾನದ ಪ್ರಮುಖ ಅಂಶವಾದ ಹಾರ್ಮೋನುಗಳನ್ನು, ಹಾರ್ಮೋನ್ ಹಾಗು ಗ್ರಂಥ ಸ್ರಾವವನ್ನು ಬದಲಾಯಿಸುವವರೆಗೆ ವಿಕಾಸವು ಅಪೂರ್ಣವೂ, ಏಕಾಂಗಿಯೂ ಆಗಿ ಉಳಿಯುತ್ತದೆ. ಒಳಗಿನ ಬದಲಾವಣೆಯಿಂದಲ್ಲದೆ ನಮ್ಮಇಳಿದೆಲ್ಲ ಪ್ರಯತ್ನಗಳೂ ಕ್ಷಣಿಕ ಫಲಕಾರಿಗಳೆಂದು ನಾವೇಕೆ ಭಾವಿಸುವುದಿಲ್ಲ?


ವಿಜ್ಞಾನದ ಒರೆಗಲ್ಲಿನ ಮೇಲೆ ಸರಿತೂಗದ ಧರ್ಮವೂ ನಮಗೆ ಸರಿಯಾದ ಮಾರ್ಗದರ್ಶನ ನೀಡಲಾರದು. ಇಂದು "ವಿಜ್ಞಾನವು" ನಮಗೆ ಒದಗಿಸಿರುವ "ಬಹುಮುಖ್ಯ" ಸಾಮಗ್ರಿಯನ್ನುಗಮನದಲ್ಲಿಟ್ಟು ಕೊಂಡು ಧರ್ಮಶಾಸ್ತ್ರ ಹಾಗೂ ಇತರ ಪುಸ್ತಕೀಯ ಶಿಕ್ಷಣವನ್ನು ಪ್ರಯೋಗಕ್ಕೆ ತಂದರೆ ನಾವು ಒಂದು ಹೊಸ ಪೀಳಿಗೆಯನ್ನೇ ತಯಾರಿಸಬಹುದು, ಸರ್ವಾಂಗ ಪರಿಪೂರ್ಣ ವ್ಯಕ್ತಿತ್ವವುಳ್ಳ ನಾಗರೀಕರನ್ನ ನಿರ್ಮಿಸಬಹುದು.


ನಮ್ಮ ಇಡೀ ದೇಹ, ಜೀವನವೇ ಒಂದು ವೈಜ್ಞಾನಿಕ ವಿಶ್ವವಿದ್ಯಾಲಯದಂತೆ ಕೆಲಸ ನಿರ್ವಹಿಸುತ್ತಿರುವಾಗ ಪ್ರತಿಯೊಂದು ಕ್ರಿಯೆ, ಪ್ರಕ್ರಿಯೆ, ಭಾವನೆಗಳು ವಿಜ್ಞಾನದ ತಳಹದಿಯಿಂದಲೇ ಪ್ರತಿಕ್ರಿಯಿಸುತ್ತಿರುವಾಗ, ವಿಜ್ಞಾನ ಮಾನವನಿಗೆ ಶಾಪವೆನ್ನುವ ಮಾತೆಲ್ಲಿ!!


ಖಂಡಿತವಾಗಿಯೂ ಈ ನಮ್ಮ ಯುವ ಪೀಳಿಗೆ ಸೂಕ್ತವಾದ, ಸಕಾರಾತ್ಮಕವಾದ ರೀತಿಯಲ್ಲಿ ಸ್ವೀಕರಿಸಿ, ಅಳವಡಿಸಿ ಕೊಂಡಿದ್ದೇ ಆದರೆ ವೈಜ್ಞಾನಿಕ ಆವಿಷ್ಕಾರಗಳು ನಿಜವಾಗಿಯೂ ವರವೇ ಸರಿ...

69 views0 comments

Recent Posts

See All

Popular Science

Popular Science

Comments


bottom of page